ಈ ಅಡುಗೆ ಮನೆಯ ವಸ್ತುಗಳು ಗ್ಯಾಸ್ಟ್ರಿಕ್ ಗೆ ರಾಮಬಾಣ
ಪ್ರಸ್ತುತ ಆಹಾರ ಪದ್ದತಿ ಹಲವಾರು ತೊಂದರೆಗಳಿಗೆ ಕಾರಣವಾಗಿದೆ. ಅವುಗಳಲ್ಲಿ ಪ್ರಮುಖವಾಗಿ ಪಾಸ್ಟಪುಡ್ಗಳು ಹಲವಾರು ರೋಗಗಳನ್ನು ಆಹ್ವಾನಿಸುತ್ತದೆ. ಗ್ಯಾಸ್ಟ್ರಿಕ್ ಎಲ್ಲ ವಯಸ್ಸಿನವರನ್ನು ಕಾಡುವ ಒಂದು ಪ್ರಮುಖ ಸಮಸ್ಯೆಯಾಗಿದೆ. ಈ
ಗ್ಯಾಸ್ಟ್ರಿಕ್ನಿಂದ ಹೊಟ್ಟೆನೋವು, ಎದೆನೋವು, ಉಸಿರಾಟದ ತೊಂದರೆ, ಎದೆಉರಿ ಹೀಗೆ ಹತ್ತು-ಹಲವಾರು ಸಮಸ್ಸೆಗಳಿಗೆ ಕಾರಣವಾಗುತ್ತದೆ. ಅಂತಹ ಗ್ಯಾಸ್ಟ್ರಿಕ್ ನಿವಾರಣೆಗೆ ನಿಮ್ಮದೇ ಅಡುಗೆ ಮನೆಯಲ್ಲಿರುವ ಈ ವಸ್ತುಗಳು ರಾಮಬಾಣವಾಗಿ ಕಾರ್ಯನಿರ್ವಹಿಸುತ್ತವೆ. ಅವುಗಳ ಬೆಗ್ಗೆ ತಿಳಿಯಲು ಮುಂದೆ ಓದಿ:
1. ಬೆಳ್ಳುಳ್ಳಿ
- ಬೆಳ್ಳುಳ್ಳಿಯು ಹಲವಾರು ಗುಣಗಳನ್ನು ಹೊಂದಿದಂತಹ ವಸ್ತುವಾಗಿದೆ. ಇದು ಗ್ಯಾಸ್ಟ್ರಿಕ್ ನಿವಾರಣೆಗೆ ಬಹಳ ಸಹಾಯಕ. ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಗ್ಯಾಸ್ಟ್ರಿಕ್, ಎದೆಉರಿ, ಹೊಟ್ಟೆನೋವು ಹೀಗೆ ಹಲವಾರು ತೊಂದರೆಗಳ ನಿವಾರಣೆಗೆ ಸಹಾಯವಾಗುತ್ತದೆ. ಆರೋಗ್ಯವನ್ನು ಅತ್ತುತ್ತಮವಾಗಿಟ್ಟುಕೊಳ್ಳಲು ಒಂದು ಬೆಳ್ಳುಳ್ಳಿ ಎಸಳನ್ನು ತಿನ್ನುವುದು ತುಂಬಾ ಒಳ್ಳೆಯದು.
Photo
Courtesy : Web Source
2. ಪುದಿನಾ - ಪುದಿನಾ ಕೂಡಾ ಗ್ಯಾಸ್ಟ್ರಿಕ್ ನಿವಾರಣೆಗೆ ಬಹಳ ಸಹಾಯಕ. ಈ
ಪುದಿನಾವನ್ನು ಟಿ ಮಾಡಿಕೊಂಡು ಸೇವಿಸುವುದರ ಮೂಲಕ ಗ್ಯಾಸ್ಟ್ರಿಕ್ ಸಮಸ್ಯಯನ್ನು ನಿವಾರಿಸಬಹುದು.
Photo
Courtesy : Web Source
3. ಶುಂಠಿ
: ಶುಂಠಿಯನ್ನು ಟಿ ಮಾಡಿಕೊಂಡು ಸೇವಿಸಬಹುದು ಅಥವಾ ಶುಂಠಿಯೊಂದಿಗೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ತಿನ್ನಬಹುದು. ಇಲ್ಲವಾದರೆ ಚಿಕ್ಕ ತುಣುಕು ಶುಂಠಿಯನ್ನು 1-2 ಬೆಳ್ಳುಳ್ಳು ಎಸಳನ್ನು ರಸಮಾಡಿ 1 ಚಿಕ್ಕ ಗ್ಲಾಸ್ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಆ ನೀರನ್ನು ಸೇವಿಸಬಹುದು.
Photo
Courtesy : Web Source
4. ಸೊಂಪು ಕಾಳು
: ಒಂದು ಚಮಚದಷ್ಟು ಸೊಂಪು ಕಾಳಿನೊಂದಿಗೆ ಸ್ವಲ್ಪ ಲಿಂಬೆ ರಸವನ್ನು ಸೇರಿಸಿ ಸರಿಯಾಗಿ ಜಗಿದು ತಿನ್ನಬೇಕು ಮತ್ತು ತಿಂದ ಮೇಲೆ ಸ್ವಲ್ಪ ಬೆಚ್ಚಗಿನ ನೀರುನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್ನಿಂದ ಪಾರಾಗಬಹುದು.
Photo
Courtesy : Web Source
5. ಇಂಗು
: ಒಂದು ಚಿಟಿಕೆಯಷ್ಟು ಇಂಗನ್ನು ಒಂದು ಗ್ಲಾಸ್ ನೀರಿನಲ್ಲಿ ಚನ್ನಾಗಿ ಕಲಕಿ ಸೇವಿಸಬೇಕು.
Photo
Courtesy : Web Source
6. ತುಳಸಿ ಎಲೆ
: ತುಳಸಿ ಎಲೆಯ 4-5 ಎಸಳನ್ನು ಚನ್ನಾಗೆ ಅಗೆದು ತಿನ್ನಬೇಕು ಇದರಿಂದ ಗ್ಯಾಸ್ಟ್ರಿಕ ನಿವಾರಿಸಬಹುದು. ಇದನ್ನ ದಿನಾಲು 3-4 ಬಾರಿ ಸೆವಿಸಿದರೆ ಒಳ್ಳೆಯದು.
Photo
Courtesy : Web Source
ಸೂಚನೆ
: ಇವುಗಳಲ್ಲಿ ಯಾವುದಾದರು ಒಂದನ್ನು ಮಾತ್ರಾ ಅನುಸರಿಸಿ. ಎಲ್ಲವನ್ನು ಒಂದೆ ವೇಳೆಗೆ ಅನುಸರಿಸಬಾರದು.






Comments
Post a Comment